ಕಾಮಧೇನು ಕದಿಯಹೊಗಿ
ಶಾಪ ಹೊತ್ತ ವಸುವು ಅವನು
ದೇವವ್ರತನಾಗಿ ಹುಟ್ಟಿ
ದಿವ್ಯ ವ್ರತವ ನಡೆಸಿದವನು
ತನ್ನದೆಂಬ ಕನಸ ಬಿಟ್ಟು
ಕರ್ತವ್ಯದ ಹೊರೆಯ ಹೊತ್ತು
ರಾಜ್ಯ ಕಾಯ್ದ ಧೀರನವನು
ಧರ್ಮಬದ್ಧ ಜೀವ ಅವನು
ತಂದೆಗಾಗಿ ಹೆಣ್ಣು ತರಲು
ತನಗೆ ಹೆಣ್ಣೇ ಬೇಡವೆಂದು
ಭೀಷಣದ ಭಾಷೆಯಿತ್ತು
ಮಾತಿನಂತೆ ನಡೆದನವನು
ಗಂಗೆಯಂಥ ತಾಯಿ ಪಡೆದು
ವಸಿಷ್ಠನಂಥ ಗುರುವ ಹೊಂದಿ
ವಾಸುದೇವನ ನಾಮಗಳನು
ಲೋಕಕೆಲ್ಲ ಸಾರಿದವನು
ಅವನೇ ನೋಡು.. ಭೀಷ್ಮನವನು
ಕುರುಕುಲದ ತೆಜನವನು
ಪರಶುರಾಮನ ಗೆಲಿದು ನಿಂತು
ಸ್ವೆಚ್ಛೆಯಿಂದ ಮಡಿದನವನು
No comments:
Post a Comment