Thursday, June 21, 2012

ನಾವು ಎತ್ತ ಕಡೆಗೆ ಹೊರಟಿದ್ದೇವೆ...?

ವಿದ್ವಾಂಸರನ್ನು ಪಕ್ಕಕ್ಕಿಟ್ಟು ದೊಡ್ಡ ಸಂಖ್ಯೆಯಲ್ಲಿರುವ  ಸಾಮಾನ್ಯರ  ದೃಷ್ಟಿಯಿಂದ ನೋಡುವುದಾದರೆ"ಧರ್ಮಎಂಬಪದವನ್ನು ಮತ್ತು  ಅದರ ಸ್ವರೂಪವನ್ನು                     ನಾವುಗಳು ತಪ್ಪಾಗಿಯೇತಿಳಿದಿದ್ದೇವೆ ಎಂದುಹೇಳಬೇಕಾಗುತ್ತದೆ ಧರ್ಮದ ಬಗ್ಗೆ ನಮ್ಮಲ್ಲಿ ಇರುವಷ್ಟು ತೊಡಕು ತೊಡಕಾದ ಮಾಹಿತಿ ಬೇರೆ ದೇಶಗಳ ಜನರಲ್ಲಿ ಕಂಡು ಬರುವುದಿಲ್ಲ. (ಆಧ್ಯಾತ್ಮ, ಸಂಸ್ಕೃತಿ, ಯೋಗ, ಪೂಜೆ, ಯಜ್ಞ, ಹೋಮ, ಪಾಪ ಪುಣ್ಯ, ಮುಂತಾದ ಶಬ್ದಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ) ಇನ್ನೂ ಸ್ಪಷ್ಟವಾಗಿ ಅರ್ಥವಾಗಬೇಕಾದರೆ ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ. ನಿಮ್ಮ ಸಂಪರ್ಕದಲ್ಲಿನ ಅತ್ಯಂತ ಸುಶಿಕ್ಷಿತರಂತೆ ಕಾಣುವ ಹಾಗೂ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿ ಆ ಮೂಲಕ ತಮ್ಮ ವಲಯ ದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ವ್ಯಕ್ತಿಯೊಬ್ಬರನ್ನು ಚರ್ಚೆಗೆಳೆದು ಹಿಂದೂ ಧರ್ಮದ ಇಂದಿನ ಪರಿಸ್ಥಿತಿ ಏನು..? ನಮ್ಮ ಜೀವನದಲ್ಲಿ ಅದರ ಪಾತ್ರವೇನು ..? ಎಂದು ಒಮ್ಮೆಲೇ ಪ್ರಶ್ನಿಸಿ ನೋಡಿ. ನಿಮ್ಮ ಪ್ರಶ್ನೆಯಿಂದ ಆ ವ್ಯಕ್ತಿ ಕಂಗಾಲಾಗಿ ಏನು ಹೇಳಬೇಕೆಂದು ತಿಳಿಯದೆ ತಡಬಡಿಸುತ್ತಾನೆ. 
ಅದೇರೀತಿ ತನ್ನನ್ನು ತಾನುಧಾರ್ಮಿಕನೆಂದು ತಿಳಿಯದ ಒಬ್ಬ ಸಾಮಾನ್ಯ ದಾರಿಹೊಕನಲ್ಲಿ ನೀವು ಇದೇ ಪ್ರಶ್ನೆಯನ್ನು ಕೇಳಿದಾಗಸಿಗುವ ಉತ್ತರ ಮೊದಲಿನ ಸ್ವಯಂಘೋಷಿತ ಧಾರ್ಮಿಕ ವ್ಯಕ್ತಿಯ ಉತ್ತರಕ್ಕಿಂತ ಹೆಚ್ಚೇನೂಬೇರೆಯಾಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಧರ್ಮವು ತನ್ನ ಆಯಾಮ್ಗಳನು ಬದಲಿಸಿಕೊಳ್ಳುತ್ತದೆ.ಆದರೆ  ಬದಲಾವಣೆಯನ್ನು ನಾವು ಸ್ವೀಕರಿಸದೆ ಇರುವುದು ಮತ್ತು ಧರ್ಮದ ಬಗ್ಗೆ ತಪ್ಪುತಿಳುವಳಿಕೆಯ ಪರಂಪರೆ ನಡೆದು ಬಂದಿರುವುದೇ ಇಂದಿನ ಈ ಸ್ಥಿತಿಗೆ ಕಾರಣ ಅಂತ ಅನ್ನಿಸುತ್ತೆ.ಅನೇಕ ರೀತಿಯ ಧಾರ್ಮಿಕತೆಯ ವೇಷಧಾರಿಗಳು ಜನರ ತಪ್ಪು ತಿಳುವಳಿಕೆಯ ಮೇಲೆ ತಮ್ಮಬೇಳೆ ಬೇಯಿಸಿಕೊಂಡು ತಪ್ಪು ತಿಳುವಳಿಕೆಯ ಪರಂಪರೆಯನ್ನು ಪ್ರಯತ್ನಪೂರ್ವಕವಾಗಿಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಹಾಗೂ ಪರಿಸ್ಥಿತಿ ಇನ್ನೂ ಜಟಿಲವಾಗುತ್ತಾ ಹೋಗುತ್ತಿದೆ.ಕೆಲವರು ಧಾರ್ಮಿಕ ಶಿಕ್ಷಣ ನೀಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತೆ ಅಂತ ಹೇಳ್ತಾರೆ.ಆದರೆ ಆರ್ಥಿಕ ಪ್ರಯೋಜನವಿಲ್ಲದ ಶಿಕ್ಷಣವನ್ನು ಪಡೆಯುವ ಸ್ಥಿತಿಯಲ್ಲಿ ಇಂದು ಯಾರೂ ಇಲ್ಲ.ಕೇವಲ ಜೀವನದಲ್ಲಿ ಸಮಸ್ಯೆಗಳು ಬಂದಾಗ ಪರಿಹಾರಕ್ಕಾಗಿ ಮಾತ್ರ ನಾವ ದೇವರ ಮೊರೆಹೋಗುತ್ತಿದ್ದೇವೆ ಮತ್ತು ಅದನ್ನೇ ಧಾರ್ಮಿಕತೆ ಅಂತ ತಿಳಿದುಕೊಂಡಿದ್ದೇವೆ. ದೇವರ ಇರುವಿಕೆಯನ್ನು ನಂಬುವುದು ಮತ್ತು ಕಷ್ಟಕಾಲದಲ್ಲಿ ಅವುಗಳನ್ನು ಪರಿಹರಿಸೆಂದು ಅವನನ್ನು ಪ್ರಾರ್ಥಿಸುವುದು ಕೇವಲ ಆಸ್ತಿಕತೆ. (ದೇವರ ಅಸ್ತಿತ್ವವನ್ನು ಒಪ್ಪುವಿಕೆ ಅಷ್ಟೇ) ಅದು ಧಾರ್ಮಿಕತೆಯೂ ಅಲ್ಲ. ಆಧ್ಯಾತ್ಮಿಕತೆಯೂ ಅಲ್ಲ.ವಾಸ್ತವವಾಗಿ ಇಲ್ಲಿ ನಾವುಗಳು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯವಿಷಯವೇನೆಂದರೆ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಎರಡು ವಿಭಿನ್ನ ವಿಷಯಗಳು. ಅಧ್ಯಾತ್ಮ ಅನ್ನೋದು ಶರೀರದೊಳಗಿನ ಆತ್ಮ, ಅದರ ಬಂಧನ, ವಿಮೋಚನೆಯ ವಿಧಾನ ಅಂದರೆ ಮುಕ್ತಿಯ ಮಾರ್ಗ, ಮಾಡಬೇಕಾದ ಸಾಧನೆ ಮುಂತಾದ ವಿಷಯಗಳನ್ನು ಒಳಗೊಂಡಿದೆ. ಇಲ್ಲಿ ಧರ್ಮದ ಪ್ರಸ್ತಾಪವೇ ಬರುವುದಿಲ್ಲ. ಭಕ್ತಿ ಮಾರ್ಗ, ಯೋಗ ಮಾರ್ಗ ಮುಂತಾದ ಅನೇಕ ದಾರಿಗಳು ಆತ್ಮ-ಪರಮಾತ್ಮ ಮಿಲನದ ದಿಕ್ಕಿನ ಕಡೆಗೆ ಹೋಗುತ್ತವೆ. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ತ್ಯಾಗವೇ ಮುಕ್ತಿ ಸಾಧನೆಯ ಏಕೈಕ ದಾರಿ (ತ್ಯಾಗೆನೈಕೆ ಅಮೃತತ್ವಮಾನಶು:) 
         ಇನ್ನು ಧರ್ಮದ ವಿಷಯಕ್ಕೆ ಬರುವುದಾದರೆ ನೈತಿಕತೆಯ ಜೀವನ ವಿಧಾನವೇ ಧರ್ಮ ಎಂದು ಹೇಳಬೇಕಾಗುತ್ತದೆ. ಆದರೆ ಧರ್ಮವನ್ನು ನಾವು ಒಂದು religion ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಇಲ್ಲಿ ಹಿಂದೂಮುಸ್ಲಿಂಕ್ರೈಸ್ತ ಮುಂತಾದವುಗಳು ಕೇವಲ ಸಿದ್ಧಾಂತಅಥವಾ ಮತದ ಹೆಸರುಗಳುಧರ್ಮ ಇವೆಲ್ಲವನ್ನೂ ಮೀರಿದ್ದು.

Tuesday, June 5, 2012

ಹೇಳಿದ್ದು ಪರರಿಗೆ. ಹೇಳುವುದೂ ಪರರಿಗೇ...!



ಮೊನ್ನೆ ಸಭೆಯೊಂದರಲ್ಲಿ ವಿದ್ವಾಂಸರೊಬ್ಬರು ಮಾತನಾಡುತ್ತಿದ್ದರು..ಅವರು ಮೀಮಾಂಸಾ ಶಾಸ್ತ್ರವನ್ನು ಗುರು ಮುಖೇನ ಅದ್ಯಯನ ಮಾಡಿದವರು. ಶ್ರಿಂಗೇರಿ ಸಂಸ್ಥಾನದ ಈಗಿನ ಮತ್ತು ಹಿಂದಿನ ಪೀಠಸ್ಥ ಸ್ವಾಮಿಗಳಿಗೆ ಸನ್ನಿಹಿತರು.  ಶೃಂಗೇರಿ ಸ್ವಾಮಿಗಳು ಸ್ವತಃ ವೇದ ಶಾಸ್ತ್ರಗಳನ್ನು ತಿಳಿದವರಾದ್ದರಿಂದ ಅಲ್ಲಿ ನಿಂತು ಶಾಸ್ತ್ರ ವಿಷಯ ಚರ್ಚೆ ಮಾಡಲು ತಾಕತ್ತು ಬೇಕು.. ಅಂತಹ ಮಠದಲ್ಲಿ ಅನೇಕ ವರ್ಷ ಇದ್ದು ಸ್ವಾಮಿಗಳಿಂದ...ಭೇಷ್ ಅನಿಸಿಕೊಂಡ ವಿದ್ವಾಂಸರು ಅವರು.. ಅನೇಕ ಸಂಸ್ಥೆಗಳು ಅವರಿಗೆ ಕೈಗೆ ಬಂಗಾರದ ಕಡಗ ತೊಡಿಸಿ ಗೌರವಿಸಿವೆ. ಅವರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು.. ''ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ತೀಯತಾಂ'' ವೇದವನ್ನು ಅನುದಿನವೂ ಅಧ್ಯಯನ ಮಾಡಬೇಕು..ಮತ್ತು ಅದರಲ್ಲಿ ಹೇಳಿದ ಸ್ವಕರ್ಮಗಳನ್ನು ತಪ್ಪದೆ ಆಚರಿಸಬೇಕು..ಸತ್ಪ್ರಜೆಗಳನ್ನು(ಮಕ್ಕಳನ್ನು)  ಪಡೆಯಬೇಕು. ಅವರಿಗೂ ಒಳ್ಳೆಯ ಸಂಸ್ಕಾರ ನೀಡಿ ಅವರನ್ನೂ ಕೂಡ ವೈದಿಕ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ನಮ್ಮೆಲ್ಲರ ಮೇಲೆ ಮೂರು ವಿಧವಾದ ಋಣಗಳು ಇರುತ್ತವೆ.. ೧.ಋಷಿ-ಋಣ. ೨.ದೇವ-ಋಣ.. ೩.ಪಿತೃ-ಋಣ . ವೆದಾಧ್ಯಯನದಿಂದ ಋಷಿಗಳ ಋಣವನ್ನು , ಯಜ್ಞ ಕರ್ಮಗಳಿಂದ ದೇವ ಋಣವನ್ನು ಹಾಗೂ ಸತ್ಪ್ರಜೆಗಳ ಉತ್ಪತ್ತಿಯಿಂದ ಪಿತೃಗಳ ಋಣವನ್ನು ಕಳೆದುಕೊಳ್ಳಬೇಕು..ಲೌಕಿಕ ಮಾರ್ಗದಲ್ಲಿ ಹೋಗಬಾರದು. ಉದ್ಯೋಗಕ್ಕಾಗಿ ವೇದಾಧ್ಯಯನ ಅಲ್ಲ... ಕರ್ತವ್ಯ ನಿರ್ವಹಣೆಗಾಗಿ.  ''ಬ್ರಾಹ್ಮಣೆನ ನಿಷ್ಕಾರಣೆನ ಷಡಂಗೋ ವೇದೋ ಅಧ್ಯೇತವ್ಯಃ, ಜ್ನೆಯಶ್ಚ''   ನಿಷ್ಕಾರಣವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ವೇದವನ್ನು ಮತ್ತು ಅದರ ಆರು ಅಂಗಗಳನ್ನು ಅಧ್ಯಯನ ಮಾಡಬೇಕು ಮತ್ತು ತಿಳಿಯಬೇಕು.  ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಭ್ರಷ್ಟರ ಮನೆಗಳಿಗೆ ಹೋಗಬಾರದು..ಸಂಭಾವನೆ ಅಥವಾ ದಕ್ಷಿಣೆಗಾಗಿ  ಹಣವಂತರ ಮುಂದೆ ಹಲ್ಲು  ಕಿರಿಯಬಾರದು. ಮುಂತಾಗಿ ಮಾತನಾಡುತ್ತಾ ಹೋದರು...ಅವರ ಮಾತುಗಳೆಲ್ಲವೂ ಒಪ್ಪಬೇಕಾದವುಗಳೇ ಆಗಿದ್ದರೂ ಕೂಡ ಈ ಎಲ್ಲ ಮಾತುಗಳನ್ನು ನಾವುಗಳು ಬಾಲ್ಯದಿಂದಲೇ ಅನೇಕ ಬಾರಿ ಕೇಳಿ ಕೇಳಿ ರೋಸಿ ಹೋಗಿತ್ತು. ವಿದ್ವಾಂಸರು ತಮ್ಮ ಮಾತಿನುದ್ದಕ್ಕೂ ನನ್ನ ಕಡೆಗೇ ನೋಡಿಕೊಂಡು ಮಾತನಾಡುತ್ತಿದ್ದರು. ಏಕೆಂದರೆ ನಾನು ಅದೇ ದಿನ ಮಧ್ಯಾನ್ಹ ಅವರಲ್ಲಿ ಒಂದು ಮಾತು ಕೇಳಿದ್ದೆ.  ''ಇತ್ತೀಚೆಗೆ ಸಂಪೂರ್ಣ ವೇದಾಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ'' ಎಂಬ  ಮಾತು  ಚರ್ಚೆಗೆ ಬಂದಾಗ..''ಹನ್ನೆರಡು ಅಥವಾ ಹದಿನೈದು ವರ್ಷ ಕಷ್ಟ ಪಟ್ಟು ವೇದ ಓದುವವರಿಗೆ ಆ ವಿದ್ಯೆಗೆ ತಕ್ಕ ಸರಿಯಾದ ಉದ್ಯೋಗವೇ ಕರ್ನಾಟಕದಲ್ಲಿ ಇಲ್ಲ. ಇನ್ನು ಯಾರಾದ್ರು ಯಾಕೆ ಓದುತ್ತಾರೆ''?   ''ಬರೀ ಪೂಜೆ ಮಂತ್ರಗಳನ್ನು ಕಲಿತು ಹೊಟ್ಟೆ ಪಾಡಿಗೆ ಪುರೋಹಿತರಾಗುತ್ತಿದ್ದಾರೆ.. ಹೀಗಾಗಿ ಅವರ ತಪ್ಪು ಇಲ್ಲ''  ವೇದಾಧ್ಯಯನ ಮಾಡುವವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಯೋಚಿಸಬೇಕು. ದೊಡ್ಡ ಮಠಗಳು ಕೂಡ ಪುರೋಹಿತರ ಮತ್ತು ಅರ್ಚಕರ (ಎರಡೂ ಬೇರೆ ಬೇರೆ ) ಸಮೂಹವನ್ನು ತಯಾರು ಮಾಡುತ್ತಿವೆಯೇ ಹೊರತು.. ವೇದ ವಿದ್ವಾಂಸರನ್ನು ತಯಾರು ಮಾಡುತ್ತಿಲ್ಲ. ಈ ಸಾವಿರಾರು ಕೋಟಿ ಆಸ್ತಿ ಹೊಂದಿರುವ, ವೈದಿಕ ಧರ್ಮ ಉಳಿಸಲಿಕ್ಕಾಗಿಯೇ ಹುಟ್ಟಿಕೊಂಡ ದೊಡ್ಡ ದೊಡ್ಡ ಮಠಗಳು.. ನಿಮ್ಮಂಥ ಹಿರಿಯರು.. ಹಾಗೂ ಸರ್ಕಾರ.. ಹೀಗೇ ಯಾರಿಂದಲೂ ''ಪೂರ್ಣವೆದಾಧ್ಯಯನ'' ಮಾಡಿಸುವ ಮತ್ತು ವೇದ ಓದಿದವರಿಗೆ ತಕ್ಕ ಉದ್ಯೋಗ ದೊರಕಿಸುವ ಪ್ರಯತ್ನ ನಡೆಯುತ್ತಿಲ್ಲ. ''ಈ ಬಗ್ಗೆ ಕಾಳಜಿ ಕಾಣಿಸುತ್ತಿಲ್ಲ'' ಎಂದು ತಿವಿದಿದ್ದೆ.  ಹೀಗಾಗಿ ಸಭೆಯಲ್ಲಿ ನನ್ನನ್ನು ಉದ್ದೇಶವಾಗಿಟ್ಟುಕೊಂಡು ಅನಗತ್ಯ ಧರ್ಮ ಬೋಧನೆ ಮಾಡತೊಡಗಿದ್ದರು. ನನಗೆ ಆಕ್ರೋಷ ತಾಳಲಾರದೆ ಅಲ್ಲೇ ವೇದಿಕೆಯಲ್ಲೇ ತಡವಿಕೊಂಡು ಚರ್ಚೆಗಿಳಿದೆ. ಆದರೆ ಅವರು,  ''ಆಮೇಲೆ ಮಾತಾಡೋಣ'', ''ಆಮೇಲೆ ಮಾತಾಡೋಣ'', ಎಂದು ಸಂಸೃತ ಭಾಷೆಯಲ್ಲಿ ನನಗಷ್ಟೇ ಅರ್ಥವಾಗುವಂತೆ ಹೇಳಿ ನುಣುಚಿಕೊಂಡರು.  ಆ ಸಭೆಯನ್ನು ಆಯೋಜಿಸಿದ ವ್ಯಕ್ತಿ ಒಂದು ಪ್ರಸಿದ್ಧ ದೇವಸ್ಥಾನದ  ಮಾಲೀಕ.   ಪರಮಾತ್ಮನ ಸೇವೆ ಎಂಬ ಸೋಗಿನಲ್ಲಿ ದೋಚಿದ ಹಣವೇ ಅವನ ಬಂಡವಾಳ.  ಆ ದೇವಸ್ಥಾನದ ಮಾಲೀಕ ಎಷ್ಟು ಧೂರ್ತ-ಅಧರ್ಮಿ ಭ್ರಷ್ಟ ಎಂಬುದು ನನಗಿಂತ ಅವರಿಗೇ ಚೆನ್ನಾಗಿ ಗೊತ್ತು. ಆದರೆ ..ಸಬೆ ಮುಗಿದಾಗ ''ಭಾರದ'' ಸಂಭಾವನೆಯ ಕವರ್  ಅನ್ನು  ವಿದ್ವಾಂಸರು ನಗುನಗುತ್ತಲೇ ಪಡೆದರು. ರಾತ್ರಿ ಊಟಕ್ಕೆ ಕುಳಿತಾಗ ಅವರನ್ನು ಮತ್ತೆ ತಡವಿ,  ಮೆಲ್ಲಗೆ ವಿಷಯಾಂತರ ಮಾಡಿ ವಿಶ್ವಾಸಕ್ಕೆ ತಂದುಕೊಂಡು ''ನಿಮ್ಮ ಮಕ್ಕಳು ಎಲ್ಲಿದ್ದಾರೆ ಏನು ಮಾಡಿಕೊಂಡಿದ್ದಾರೆ..? ಎಂದು ಕೇಳಿದೆ. ''ದೊಡ್ಡ ಮಗ ಇನ್ಫೋಸಿಸ್ ನಲ್ಲಿ ಇದಾನೆ. ಎರಡನೆಯವನು ಕೇಟರಿಂಗ್ ಮಾಡುತ್ತಾನೆ. ಮೂರನೆಯವನು ಕೂಡ ಸಾಫ್ಟ್ ವೇರ್ ಇಂಜಿನಿಯರ್..  ಅರವತ್ತು ಸಾವಿರ ಸಂಬಳ''. ಎಂದು ಹೇಳುವಾಗ ಅವರ ಮುಖದಲ್ಲಿ ಅಗತ್ಯಕ್ಕಿಂತ ಹೆಚ್ಚು ಗರ್ವ ಅಸಹ್ಯವಾಗಿ ಕಾಣುತ್ತಿತ್ತು. ನಾನು ಅವರ ಮಕ್ಕಳ ಉದ್ಯೋಗದ ಬಗ್ಗೆ ಯಾಕೆ ಕೇಳಿದೆ ಎಂದು ಅವರಿಗೆ ಗೊತ್ತಾದಂತೆ ತೋರಲಿಲ್ಲ.  ''ನೀವು ಪೂರ್ವ ಮೀಮಾಂಸಾ ಮತ್ತು ಉತ್ತರ ಮೀಮಾಂಸಾ ಎರಡನ್ನು ಓದಿದ್ದೀರಿ. ಆದರೆ ವೇದಾಧ್ಯಯನ ಎಲ್ಲಿಯ ವರೆಗೆ  ಆಗಿದೆ''?  ಎಂದು ಕೇಳಿದೆ.. '' ನಾವು ಓದುವ ಕಾಲದಲ್ಲಿ ಈಗಿನಂತೆ ಒಳ್ಳೆಯ ವೇದ ಪಾಠಶಾಲೆಗಳು  ಇರಲಿಲ್ಲ'' ಎಂಬುದಷ್ಟೇ ಅವರ ಉತ್ತರವಾಗಿತ್ತು. (ಏಕೆಂದರೆ ಕೇವಲ ಪೂಜೆ-ಪುನಸ್ಕಾರಗಳಿಗೆ,  ಹೋಮ-ಹವನಗಳಿಗೆ ಬೇಕಾಗುವಷ್ಟು ಮಂತ್ರಗಳು ಮಾತ್ರ ಅವರಿಗೆ ತಿಳಿದಿವೆ) ಊಟವಾದ ಮೇಲೆ ತಾಂಬೂಲ ಮೆಲ್ಲುತ್ತಾ ಅವರು ತಮಗೆ ಉಪರಾಷ್ಟ್ರಪತಿಗಳಿಂದ ದಿಲ್ಲಿಯಲ್ಲಿ ನಡೆದ ಸನ್ಮಾನದ ಕಥೆಯನ್ನು ಹೇಳತೊಡಗಿದರು. ನನಗೆ ಸಹಿಸಲಾಗದೆ..'' ಈ ಕಥೆಗಳನ್ನೆಲ್ಲಾ..ನಿಮ್ಮ ಮೊಮ್ಮಕ್ಕಳಿಗೆ ಹೇಳಿ..ಚೆನ್ನಾಗಿರುತ್ತೆ..'' ಎಂದು ಕಟುವಾಗಿ ಹೇಳಿ ಅಲ್ಲಿಂದ ಎದ್ದು ಹೊರಟೆ. ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವಮಾನವಾದಂತಾಗಿ ಅವರು ಅವಾಕ್ಕಾದರು. ಆದರೆ ಅವರಿಗೆ ಅವಮಾನ ಮಾಡಿದೆನೆಂಬ ಭಾವವೇ ನನಗೆ ಬರಲಿಲ್ಲ. ಬದಲಾಗಿ ''ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ'' ಎನ್ನುವ   ಶಾಪ  ನನ್ನ   ಮನಸಿನಲ್ಲಿ ತಾನೇ ತಾನಾಗಿ ಮೂಡಿ ನಿಂತಿತ್ತು.